ಪ್ರದೇಶವೊಂದನ್ನು (ಅದು ರಾಜ್ಯವಾಗಿರಲಿ ಅಥವಾ ರಾಜ್ಯವೊಂದರ ಭಾಗವಾಗಿರಲಿ) ದೇಶದಲ್ಲಿ ಇರುವಂತೆ ಮಾಡುವ ಅನೇಕ ಸಮಾನ ಅಂಶಗಳಿರುತ್ತವೆ. ಅವುಗಳಲ್ಲಿ ಅತ್ಯಂತ ಮುಖ್ಯವಾಗಿದ್ದು ಆ ಪ್ರದೇಶದ ಜನಮತಸಾಂದ್ರತೆ (demography) ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ. ಒಮ್ಮೆ ಆ ಪ್ರದೇಶದ ಜನಮತಸಾಂದ್ರತೆ ಬದಲಾದರೆ ಎಲ್ಲವೂ ಬದಲಾಗುತ್ತದೆ. ಇಲ್ಲಿ ಎಲ್ಲವೂ ಅಂದರೆ ಆ ಪ್ರದೇಶದ ಭಾಷೆ, ಆಚಾರ-ವಿಚಾರ, ರಾಷ್ಟ್ರನಿಷ್ಠೆ, ನಾಯಕರುಗಳು-ಎಲ್ಲವೂ ಬದಲಾಗುತ್ತದೆ!!! ಇದಕ್ಕೆ ಕಶ್ಮೀರಕಣಿವೆಯ ಉದಾಹರಣೆಯೇ ನಮ್ಮ ಕಣ್ಣುಮುಂದೆ (ಕಣ್ಣಿದ್ದವರಿಗೆ) ಕಾಣುತ್ತಿದೆ. ಕಲ್ಹಣ ಸಾಹಿತ್ಯ ರಚಿಸಿದ ಆ ಕಾಶ್ಮೀರಿ ಭಾಷೆ ಕಣಿವೆಯಲ್ಲಿ ಎಲ್ಲಿದೆ? ಬೋರ್ಡ್ ಗಳಲ್ಲೆಲ್ಲಾ ಅರಬಿ ಲಿಪಿ. ‘India’ ಎಂದು ಕಾಣುವ ಬೋರ್ಡ್ ಗಳ ಮೇಲೆ ಕಲ್ಲು, ಆಗಸ್ಟ್ ೧೫ ಬಂದ್!! ವಿಜೃಂಭಣೆಯ ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆ!!! ನಾಗಲ್ಯಾಂಡ್, ಮಿಜೊರಾಂ ಪರಿಸ್ಥಿತಿಯೂ (ಸದ್ಯಕ್ಕೆ ತಣ್ಣಕ್ಕಿದ್ದಂತೆ ಕಂಡರೂ) ತುಂಬವೇನು ಭಿನ್ನವಾಗಿಲ್ಲ. ಒಟ್ಟು ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದು ಕಶ್ಮೀರ, ನಾಗಲ್ಯಾಂಡ್ ಮತ್ತು ಮಿಜೋರಾಂಗಳಲ್ಲಿ ಅವರು ತುಂಬಾ ಅಲ್ಪಸಂಖ್ಯಾತರಾಗಿದ್ದು ಮುಸ್ಲಿಂ ಹಾಗೂ ಕ್ರೈಸ್ತರು ಅಲ್ಲಿ ಬಹುಸಂಖ್ಯಾತರಾಗಿರುವುದೇ ಇದಕ್ಕೆ ಕಾರಣ. (ಹಿಂದೂಗಳು ಅಲ್ಪಸಂಖ್ಯಾತರಾಗಿರುವ ಆದರೆ ಬೌದ್ದರೇ ಸಾಕಷ್ಟು ಸಂಖ್ಯೆಯಲ್ಲಿರುವ ಲಡಕ್ ಪ್ರದೇಶದಲ್ಲಿ ಈ ಸಮಸ್ಯೆ ಅಷ್ಟಿಲ್ಲ!!) ಒಮ್ಮೆ ಜನಮತಸಾಂದ್ರತೆ ಬದಲಾದರೆ ರಾಷ್ಟ್ರನಿಷ್ಟೆಯೂ ಬದಲಾಗುತ್ತದೆಂಬುದು (ಪ್ರಪಂಚ ಮಟ್ಟದಲ್ಲಿ) ಅಪ್ರಿಯ ಸತ್ಯ.
‘ಪ್ರಪಂಚ ಮಟ್ಟದಲ್ಲಿ’ ಎಂಬ ಪದಗಳನ್ನು ಉಪಯೋಗಿಸಿದೆ. ಹೌದು. ಆಗಿದೆ. ಆಗುತ್ತಿದೆ.ಮತ್ತು ಆಗುತ್ತದೆ!!! ಪಾಕಿಸ್ತಾನ-ಬಾಂಗ್ಲಾ ದೇಶ ತೆಗೆದುಕೊಳ್ಳಿ. ಮೊದಲು ಭಾರತದ ಒಂದು ಭಾಗವಾಗಿದ್ದವು. ಇಂದು? ಹಿಂದೂಗಳು ಕಡಿಮೆಯಿದ್ದ ಆ ಪ್ರದೇಶಗಳು ಭಾರತದಿಂದ ಬೇರೆಯೇ ಆದವು. ಅಂದು ಅಶ್ವಘೋಷ ದೊಡ್ಡ ಕಂಠದಿಂದ ಹಾಡಿದ ಪೇಶಾವರ ಇಂದು ಏನಾಗಿದೆ? (ಪರಸ್ಪರ ಹೊಡೆದಾಡುವ-ಬಡಿದಾಡುವ ಜನರ ಗೂಡಾಗಿದೆ!!). ಮುಸ್ಲಿಂ ಬಹುಸಂಖ್ಯಾತ ಇಂಡೋನೇಷ್ಯಾದಲ್ಲಿ ಏನಾಯಿತು? ಆ ದೇಶದ ಒಂದು ಭಾಗವಾಗಿದ್ದ (ಮಿಷನರಿಗಳ ಕೃಪೆಯಿಂದ) ಕ್ರೈಸ್ತ ಬಹುಸಂಖ್ಯಾತವಾಗಿದ್ದ ಈಸ್ಟ್ ಟಿಮೋರ್ ಪ್ರದೇಶ ಇಂದು ಹೊಸದೇಶವಾಗಿದೆ. ಅಂತರಾಷ್ಟ್ರೀಯ ಒತ್ತಡಕ್ಕೆ ಮಣಿದು ಗಲಬೆ ಪೀಡಿತ ಈಸ್ಟ್ ಟಿಮೋರ್ ನಿಂದ ಇಂಡೋನೇಷ್ಯ ಸೇನೆ ಹೊರಬಂದು ಕ್ರೈಸ್ತರೇ ಬಹುಸಂಖ್ಯಾತರಾದ ಹೊಸ ದೇಶ ಸೃಷ್ಟಿಯಾಯಿತು. (ಇಡೀ ಏಷ್ಯಾದಲ್ಲಿ ಇರುವುದು ಎರಡೇ ಕ್ಯಾಥೊಲಿಕ್ ಕ್ರೈಸ್ತ ಬಹುಸಂಖ್ಯಾತ ದೇಶಗಳು-ಈಸ್ಟ್ ಟಿಮೋರ್ ಮತ್ತು ಪಿಲಿಪ್ಪೈನ್ಸ್). ಆದರೆ ಇಲ್ಲಿ ಗಮನಿಸಬೇಕಾದ ಸಂಗತಿಯೇನೆಂದರೆ ಹಿಂದೂ ಬಹುಸಂಖ್ಯಾತ ಬಾಲಿ ದ್ವೀಪ ಇಂಡೋನೇಷ್ಯಾದ ಭಾಗವಾಗೇ ಇದೆ. ಅಲ್ಲಿ ಪ್ರತ್ಯೇಕತಾ ಚಳುವಳಿಗಳು ಇಲ್ಲ!!! ಥಾಯ್ಲಂಡ್ನಲ್ಲೂ ಮುಸ್ಲಿಮ್ಮರು ಹೆಚ್ಚಾಗಿರುವ ಮಲೇಶಿಯಾಕ್ಕೆ ತಾಗಿರುವ ದಕ್ಷಿಣ ಭಾಗದಲ್ಲಿ ಪ್ರತ್ಯೇಕತಾ ಹೋರಾಟ. ಕ್ರೈಸ್ತ ಬಹುಸಂಖ್ಯಾತ ಪಿಲಿಪ್ಪೈನ್ಸ್ ನಲ್ಲೂ ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿ ಕಿರಿಕಿರಿ. ಹೇಗೆ ಜನಮತಸಾಂದ್ರತೆ ಬದಲಾದಂತೆ ರಾಷ್ಟ್ರನಿಷ್ಟೆ ಬದಲಾಗುತ್ತದೆ ಗಮನಿಸಿ!!
‘ಹೌದು. ಹೌದು. ಏನೂ ಮಾಡೋಕ್ಕಾಗಲ್ಲ ಬಿಡಿ.’- ಎಂಬುದೇ ನಿಮ್ಮ ಅಭಿಪ್ರಾಯವಾದರೆ ‘ಜಗತ್ತಿನ ನಾಳಿನ ದೊಡ್ಡಣ್ಣ’ ಚೀನಾದ ಕಡೆ ನೋಡಿ. ನಮ್ಮ ಕಶ್ಮೀರದ ಉತ್ತರಕ್ಕಿರುವ ಕ್ಸಿಕಿಯಾಂಗ್ (Xinjiang-ಇದರ ಉಚ್ಚಾರ ಕನ್ನಡದಲ್ಲಿ ಬರೆಯುವುದು ಕಷ್ಟ!!) ಪ್ರದೇಶ ಚೀನಾದಲ್ಲಿ ಮುಸ್ಲಿಮ್ಮರು ಹೆಚ್ಚಿರುವ ಪ್ರದೇಶ. ಸಮುದ್ರ-ಹಡಗುಗಳ ಮೂಲಕ ವ್ಯಾಪಾರ-ವಹಿವಾಟು ಆರಂಭವಾಗುವುದಕ್ಕೆ ಮೊದಲು ಚೀನಾ ಮತ್ತು ಯೂರೋಪ್ ಮಧ್ಯೆ ವಹಿವಾಟು ಈ ಪ್ರಾಂತ್ಯದ ಮೂಲಕವೇ ನಡೆಯುತ್ತಿತ್ತು. (ಈ ದಾರಿಗೆ ರೇಷ್ಮೆ ಹೆದ್ದಾರಿ (Silk Road) ಎಂದೇ ಕರೆಯುತ್ತಿದ್ದರು). ಟರ್ಕಿ ಭಾಷೆ ಮಾತಾಡುವ ವೀಗುರ್ ಮುಸ್ಲಿಮ್ಮರು ಲಕ್ಷ ಲಕ್ಷ ಸಂಖ್ಯೆಯಲ್ಲಿ ನೋಡಲು ಬಂಜರು ಭೂಮಿಯಂತೆ ಕಾಣುವ ಎತ್ತರ ಬೆಟ್ಟಗಳಿಂದ ಸುತ್ತುವರೆದ ಈ ಕ್ಸಿಕಿಯಾಂಗ್ ಪ್ರದೇಶದಲ್ಲಿ ವಾಸಿಸುತ್ತಾರೆ. (ಬಹುಶಃ ಟರ್ಕಿಯಿಂದ ಬಂದು ಅಲ್ಲಿ ಮೊದಲು ವಾಸಿಸುತ್ತಿದ್ದ ‘ಅಹಿಂಸಾವಾದಿ’ ಬೌದ್ದರನ್ನು ಸುಲಭದಲ್ಲಿ ತರಿದು ಹಾಕಿ ನೆಲೆಗೊಂಡ ಜನಾಂಗವಿರಬಹುದು). ಎರೆಡುಬಾರಿ ಸ್ವಾತಂತ್ರ ಘೋಷಿಸಿಕೊಂಡರೂ ಚೈನಾದಲ್ಲಿ ಮಾವೋವಾದಿ ಕಮ್ಯುನಿಸ್ಟ್ ಪಾರ್ಟಿ ಬಲವಾದಂತೆ ಸೈನಿಕ ಕಾರ್ಯಾಚರಣೆಯಿಂದಾಗಿ ‘ಕ್ಸಿಕಿಯಾಂಗ್ ವೀಗುರ್ ಅಟಾನಾಮಸ್ ರೀಜನ್’ ಚೀನಾದ ಒಂದು ಪ್ರಾಂತ್ಯವಾಗಿ ವಿಲೀನವಾಯಿತು. ಅದಾಗುತ್ತಿದ್ದಂತೆ ನಡೆದಿದ್ದೇ ಚೀನಾದ ದೂರದೃಷ್ಟಿಯುಳ್ಳ ನಾಯಕರಿಂದ ನಡೆದ ಜನಮತಸಾಂದ್ರತೆ ಬದಲಾವಣೆಯ ಪ್ರಯತ್ನ!!!




ಈಗ ನಿಮ್ಮ ಅನಿಸಿಕೆ ಹೇಳಿ. ಒಮ್ಮೆ ಜನಮತಸಾಂದ್ರತೆ ಬದಲಾದರೆ ಎಲ್ಲವೂ ಬದಲಾಗುತ್ತದೆ-ಎಂಬ ನನ್ನ ಅನಿಸಿಕೆ ಸರಿಯೇ ತಪ್ಪೇ? ಅಥವಾ ನನ್ನೆಣಿಕೆ ತಪ್ಪೇ???
ನಿಮ್ಮ ಅನಿಸಿಕೆ ಸರಿ. ಮಾಹಿತಿಪೂರ್ಣ ಬರಹ. ಚೆನ್ನಾಗಿದೆ.
ReplyDeleteಸುಬ್ರಮಣ್ಯ ಸರ್,
ReplyDeleteನಿಮ್ಮ ಅನಿಸಿಕೆ ಸರಿಯಾಗೇ ಇದೆ. ಆದರೆ ದೊಡ್ಡ ಅಧಿಕಾರಿಗಳು, ನಾಯಕರು ಇದನ್ನೆಲ್ಲಾ ಅರ್ಥಮಾಡಿಕೊಳ್ಳುವ ಮನಸ್ಸಿನಲ್ಲಿದ್ದಾರೆಯೇ? ಅವರಿಗೆ ಸಿಗುವ ಹಣದ ಬಗ್ಗೆ ಯೋಚಿಸುವುದರಲ್ಲೇ ಕಾಲ ಕಳೆಯುತ್ತಾರೆ....
ಏನೇ ಇರಲಿ, ಮಾಹಿತಿಪೂರ್ಣ ಲೇಖನ........
ನಿಮ್ಮ ಅನಿಸಿಕೆ ಸರಿಯಾದದ್ದೇ! ಮಾಹಿತಿಪೂರ್ಣ ಲೇಖನ! ಧನ್ಯವಾದಗಳು.
ReplyDeleteuttama lekhana . chennaagi moodibandide.
ReplyDeleteತುಂಬಾ ಉಪಯುಕ್ತ ಲೇಖನ
ReplyDeleteಸುಂದರವಾಗಿದೆ
ವಿಶ್ಲೇಷಣೆ ಸರಿಯಾಗಿ ಮಾಡಿದ್ದೀರಿ. ಹೊತ್ತಿ ಉರಿಯುತ್ತಿರುವ ಸಮಸ್ಯೆಗಳು, ಮುಗಿಯುವುದೆಂದೊ
ReplyDeleteಮುಂದಾಲೋಚನೆ ಇಲ್ಲದ ನಾಯಕರುಗಳನ್ನು ಆಯ್ಕೆ ಮಾಡುವ ಆಲೋಚನೆಯನ್ನೆ ಮಾಡದ ನಮ್ಮ ಪ್ರಜಾಪ್ರಭುಗಳಿರುವವರೆಗೆ ಭಾರತ ಹೀಗೆ ಇರುತ್ತೆ.
ReplyDeleteಲೇಖನ ಚೆನ್ನಿದೆ.
ತುಂಬ ಚೆನ್ನಾಗಿ ವಿಶ್ಲೆಷಿಸಿ ಲೇಖನವನ್ನು ಬರೆದಿದ್ದಿರ. ಅನುಛೇದ ೩೭೦ ಬದಲಯಿಸಲು ನಮ್ಮ ಭಾರತ ಸರ್ಕಾರಕ್ಕೆ ಇನ್ನು ಎಷ್ಟು ವರ್ಷ ಬೇಕಾಗಬಹುದೋ ..
ReplyDeleteನಿಮ್ಮ ಅನಿಸಿಕೆ ಸರಿ. ಇದೇ ಕಾರಣಕ್ಕೇ ಇರಬೇಕು, ಇತ್ತೀಚೆಗೆ ಪ್ರಸಿದ್ಧ ಲೇಖಕಿ ಅರುಂಧತಿ ರಾಯ್ ಕಾಶ್ಮೀರ ಪಾಕಿಸ್ತಾನದ ಭಾಗವಾಗಿದೆ ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ReplyDeleteನಮ್ಮಲ್ಲೂ ಒಬ್ಬ ಕಾಶ್ಮೀರಿ ಇದ್ದಾನೆ.. ಮಾತೆತ್ತಿದ್ದರೆ ನೀವೆಲ್ಲಾ ವಸಾಹತುಶಾಹಿಗಳು, ನಮ್ಮ ಸ್ವಾತಂತ್ರ್ಯ ದಮನ ಮಾಡಿದ್ದೀರಿ ಎನ್ನುತ್ತಾನೆ.. ಇರುವುದೊಂದೆ ದಾರಿ, ಸಂವಿಧಾನದ ೩೭೦ನೇ ವಿಧಿಗೆ ಗುಡ್ಬೈ ಹೇಳಿ ನಮ್ಮ ಬಿಹಾರಿ ಯುಪಿಗಳನ್ನ ಅಲ್ಲಿ ಡಂಪ್ ಮಾಡುವುದು... ತುಂಬಾ ವಿಚಾರಪೂರ್ಣ ಲೇಖನ... ಧನ್ಯವಾದಗಳು.
ReplyDeleteಮಾನ್ಯ ಸುಬ್ರಮಣ್ಯ ಅವರೇ,
ReplyDeleteನಿಮ್ಮ ಲೇಖನ ತರ್ಕಬದ್ಧವಾಗಿತ್ತು. ಇದನ್ನು ಸಂಯುಕ್ತ ಕರ್ನಾಟಕದಲ್ಲಿ ಪುನರ್ಪ್ರಕಟಿಸಬೇಕೆಂದು ನಿಮ್ಮನ್ನು ಸಂಪರ್ಕಿಸಲು ಹುಡುಕಾಡಿದೆ. ಆದರೆ, ನಿಮ್ಮ ಈಮೇಲ್ ಅಥವಾ ದೂರವಾಣಿ ನನಗೆ ಸಿಗಲಿಲ್ಲ. ಹೀಗಾಗಿ, ನಿಮ್ಮ ಪೂರ್ವಾನುಮತಿ ಪಡೆಯದೇ ಲೇಖನವನ್ನು ಸಂ.ಕ.ದಲ್ಲಿ ಪ್ರಕಟಿಸಿದ್ದೇನೆ. ಪ್ರಕಟಿತ ಪತ್ರಿಕೆಯ ವೆಬ್ ವಿಳಾಸ ಇದು: http://epaper.samyukthakarnataka.com/41054/Samyuktha-Karnataka/June-06-2012-Ba#page/13/2
ಉತ್ತಮ ಲೇಖನಕ್ಕಾಗಿ ಧನ್ಯವಾದಗಳು. ಈ ಲೇಖನ ಎತ್ತಿರುವ ಪ್ರಶ್ನೆಗಳನ್ನು ನಮ್ಮ ರಾಜಕಾರಣಿಗಳು ಹಾಗೂ ಎಡಪಂಥೀಯರು ಗಮನಿಸುವುದು ಉತ್ತಮ ಅನಿಸುತ್ತದೆ.
- ಚಾಮರಾಜ ಸವಡಿ
ಸಂಪೂರ್ಣವಾಗಿ ಓದಿದ್ದೇನೆ, ಲೇಖನ ವಿಷಯ ಪೂರಿತ, ಆದರೆ ಅರುಂಧತಿ ರಾಯ್ ಹೇಳಿದ್ದಕ್ಕೆ ನಾನು ಸಹಮತಿಸುವುದಿಲ್ಲ, ಪಾಕಿಸ್ತಾನದ ಸರ್ವನಾಶ ಜಾಗತಿಕ ಶಾಂತಿಗೆ ಕಾರಣವಾಗುತ್ತದೆ, ಅದರ ಬಗ್ಗೆ ಜಾಗತಿಕ ಮಟ್ಟದಲ್ಲಿ ಜನ ಚಿಂತನೆ ನಡೆಸಬೇಕಾಗಿದೆ, ಹಿಂದೂಗಳು ರಾಜಕೀಯದ ದುರುದ್ದೇಶ ಇಟ್ಟುಕೊಳ್ಳದೆ ವ್ಯವಹರಿಸಿದರೆ ರಾಮಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣ ಆಗೇ ಬಿಡುತ್ತದೆ, ಕಾಶ್ಮೀರವೇಕೆ? ಪಾಕಿಸ್ತಾನದ ಕೆಲವು ಭಾಗಗಳೂ ಮರಳಿ ನಮಗೆ ಬರುತ್ತವೆ, ಆ ಕೆಲಸಕ್ಕೆ ಸರಸಂಘದ ಶಕ್ತಿ ಅನುವಾಗಲಿ, ಅದ್ಕೂ ಮುನ್ನ ದೇಶದ್ರೋಹಿಗಳಾಗಿರುವ ಮ್ಲೇಚ್ಛರನ್ನು ಭಾರತದಿಂದ ಓಡಿಸಬೇಕು, ಅದು ಸಾಧ್ಯವಾಗುವ ಕಾಲ ಹತ್ತಿರ ಬರುತ್ತಿದೆ, ಕಾಡು ನೋಡಿ.
ReplyDeletemlehchha endarenu anta gottagalilla..dayavittu uttarisi
Delete