Friday, August 7, 2009

ಕರ್ನಾಟಕವನ್ನು ಒಡೆಯೋಣ !!!!!.

ಅರೆ !! ಇದೇನಪ್ಪ !!! ಈ ಥರ ಹೇಳ್ತಿದ್ದಾರೆ ಅಂತಾ ಆಶ್ಚರ್ಯನಾ ? ಈ ಲೇಖನ ಪೂರ್ತಿ ಓದಿದಮೇಲೆ ನಿಮ್ಮ ಅಭಿಪ್ರಾಯ ಹೇಳಿ. (ದಯವಿಟ್ಟು ಈ ಲೇಖನವನ್ನ ವಾಟಾಳ್ ನಾಗರಾಜ್ ಗೆ ಕೊಡಬೇಡಿ. ನನ್ನ ತಿಥಿ ಮಾಡ್ತಾರೆ.)

'ಚಿಕ್ಕ ರಾಜ್ಯ, ಚೊಕ್ಕ ರಾಜ್ಯ' ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ. ನಾಲ್ಕೈದು ವರ್ಷಗಳಿಂದ 'India Today' ವಾರ ಪತ್ರಿಕೆ ಭಾರತದ ರಾಜ್ಯಗಳಿಗೆ ranking ನೀಡುತ್ತಿದೆ. ಆಡಳಿತ, ಆರೋಗ್ಯ, ಕೃಷಿ, ಕಾನೂನು ವ್ಯವಸ್ಥೆ-ಮೊದಲಾದ ವಿಷಯಗಳಲ್ಲಿ ರಾಜ್ಯಗಳ ಸಾದನೆಯ ಮೇಲೆ ಈ ranking ನೀಡಲಾಗುತ್ತದೆ. ಮೇಲಿನ rank ಗಳೆಲ್ಲಾ ಸಣ್ಣ ರಾಜ್ಯಗಳ ಪಾಲಾಗುವುದನ್ನು ಗಮನಿಸಿದ ಪತ್ರಿಕೆ ಈಗ ದೊಡ್ಡ ರಾಜ್ಯಗಳಿಗೆ ಬೇರೆ ಚಿಕ್ಕ ರಾಜ್ಯಗಳಿಗೆ ಬೇರೆ ranking ನೀಡುತ್ತಿದೆ.

ಆಡಳಿತ, ಕಾನೂನು ವ್ಯವಸ್ಥೆ ಪಾಲನೆ-ಇವೆಲ್ಲ ದೊಡ್ಡ ರಾಜ್ಯಗಳಲ್ಲಿ ತುಂಬಾ ಕಷ್ಟ. ರಾಜ ಎಲ್ಲೋ; ಪ್ರಜೆಗಳು ಎಲ್ಲೋ. ಉತ್ತರ ಪ್ರದೇಶವನ್ನೇ ನೋಡಿ. 70 ಕ್ಕೂ ಹೆಚ್ಚು ಜಿಲ್ಲೆಗಳು. ಮಾಯಾವತಿ ಎಷ್ಟು ಜಿಲ್ಲಾಧಿಕಾರಿಗಳ ಹೆಸರು ಜ್ಞಾಪಕ ಇಟ್ಟುಕೊಳ್ಳಲು ಸಾದ್ಯ?
ಆಡಳಿತ ಯಂತ್ರ ಹಳ್ಳ ಹಿಡಿಯುತ್ತೆ. ಅದೇ 10 ರಿಂದ 12 ಜಿಲ್ಲೆಗಳ ಚಿಕ್ಕ ರಾಜ್ಯಗಳಾದರೆ ಆಡಳಿತ ಸುಲಭ.

ಕರ್ನಾಟಕದಲ್ಲಿ ನೋಡಿ. ರಾಜಧಾನಿಯಿಂದ ದೂರವಿರುವ ಉತ್ತರ ಕರ್ನಾಟಕ ಹಿಂದುಳಿದಿದೆ. ಬೀದರ್ ನಿಂದ ಬೆಂಗಳೂರು ಎಷ್ಟು ದೂರ. ಅಲ್ಲಿ ನಡೆಯುವ ಅಭಿವೃದ್ದಿ ಕಾರ್ಯಗಳ ನಿಗವಹಿಸುವುದು ಯಾರು? ಉತ್ತರ ಕರ್ನಾಟಕದಿಂದ ಆರಿಸಿ ಬರುವ ಜನ ಪ್ರತಿನಿದಿಗಳು ಬೆಂಗಳುರಲ್ಲೂ ತಮ್ಮ ಆಸ್ತಿ ಅಭಿವೃದ್ದಿ ಮಾಡಿಕೊಳ್ಳುತ್ತಾರೆಯೇ ವಿನಃ ಸ್ವಕ್ಷೇತ್ರ ಮರೆಯುತ್ತಾರೆ. ಉತ್ತರ ಕರ್ನಾಟಕಕ್ಕೆ ಮಲತಾಯಿ ದೋರಣೆ ಮಾಡುತ್ತಾರೆಂದು ಬೊಬ್ಬಿಡುತ್ತಾರೆ.

ಭಾರತದ ದೊಡ್ಡ ರಾಜ್ಯಗಳನ್ನೆಲ್ಲ ಒಡೆದು ಚಿಕ್ಕ ರಾಜ್ಯಗಳನ್ನಾಗಿ ಯಾಕೆ ಮಾಡಬಾರದು? ಉತ್ತರ ಪ್ರದೇಶವನ್ನು 4 ರಾಜ್ಯಗಳನ್ನಾಗಿ ಮಾಡಬಹುದು. ತಮಿಳು ನಾಡು, ಅಂದ್ರ 3 ಚಿಕ್ಕ ರಾಜ್ಯಗಳನ್ನಾಗಿ ಒಡೆಯಬಹುದು. ಕೇರಳವನ್ನು 2 ರಾಜ್ಯಗಳನ್ನಾಗಿ ಮಾಡಬಹುದು. 50 ರಾಜ್ಯಗಳಾಗಲಿ. ಏನೀಗ?

ಅದೇ ರೀತಿ ಕರ್ನಾಟಕವನ್ನು ಕೂಡ ಮೂರು ಚಿಕ್ಕ ರಾಜ್ಯಗಳಾಗಿ ಒಡೆಯಬಹುದು.
ಉತ್ತರ ಕರ್ನಾಟಕ
ದಕ್ಷಿಣ ಕರ್ನಾಟಕ
ಮಲೆನಾಡು ಮತ್ತು ಕರಾವಳಿ ಕರ್ನಾಟಕ.
ಜವಾಬ್ದಾರಿ ಬೆನ್ನಮೇಲೆ ಬಿದ್ದರೆ ಎಲ್ಲ ಮುಂದೆ ಬರುತ್ತಾರೆ. ಇಲ್ಲದಿದ್ದರೆ ಎಲ್ಲಿರುತ್ತಾರೋ ಅಲ್ಲೇ ಇರುತ್ತಾರೆ.

ನಿವೆನಂತಿರಿ? ಉತ್ತರ ಕರ್ನಾಟಕ ಮತ್ತು ಮಲೆನಾಡು ಮತ್ತು ಕರಾವಳಿ ಕರ್ನಾಟಕಕ್ಕೆ ರಾಜಧಾನಿಗಳು ಯಾವುದು ಆಗಲಿ?

8 comments:

  1. ಚನ್ನಾಗಿದೆ. ಮೊದಲ ಬರಹ ಅಲ್ಲವೇ...
    ನನಗನ್ನಿಸುತ್ತೆ ನೀವು ನಿಮ್ಮ ಅನುಭವಗಳ ಬಗ್ಗೆಯೇ ಏಕೆ ಬರೆಯಬಾರದು?

    ReplyDelete
  2. ಒಳ್ಳೆಯ ಬರಹ, ಬ್ಲಾಗ್ ಲೋಕಕ್ಕೆ ಸ್ವಾಗತ, ನಿಮ್ಮಿಂದ ಇನ್ನು ಅನೇಕ ಒಳ್ಳೆಯ ಲೇಖನಗಳು ಮೂಡಿ ಬರಲಿ

    ReplyDelete
  3. ರಾಜ್ಯಗಳನ್ನು ಓಡೆಯೋದರ ಬದಲು, ರಾಜ್ಯಗಳ ಸರಕಾರಕ್ಕೆ ಹೆಚ್ಚಿನ ಶಕ್ತಿ ನೀಡಬೇಕು ಎಂಬುದು ನನ್ನ ಅನಿಸಿಕೆ.
    ಕರ್ನಾಟಕ ರಾಜ್ಯದ ಒಳಿತಿನ ಬಗ್ಗೆ, ಇಲ್ಲಿಯ ಅಧಿಕಾರಿಗಳಿಗೆ ಹೆಚ್ಚಿನ ಅರಿವು ಇರುತ್ತದೆ. ಒಳಿತಾಗುವ ಪ್ರಾಜೆಕ್ಟ್-ಗಳಿಗೆ ಹಣ (ಹೆಚ್ಚಿನ ಸಮಯಗಳಲ್ಲಿ) ಸಂದಾಯವಾಗುವುದು ದೆಹಲಿಯಿಂದ. ದೆಹಲಿಯಲ್ಲಿ ಲಾಬಿ ಮಾಡದೇ ಕೆಲಸ ಆಗುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಲಾಬಿ ಜೊತೆಗೆ, ಆಯಾ ರಾಜ್ಯಗಳಲ್ಲಿ ಎಷ್ಟು (ಲೋಕ ಸಭೆ) ಸೀಟುಗಳು ಇವೆ ಎಂಬುದೂ ಮುಖ್ಯವಾಗುತ್ತದೆ. ಕರ್ನಾಟಕವು ಹೊಂದಿರುವ ೨೮ ಸೀಟುಗಳು ಸಾಕಾಗದೇ ಇರುವುದರಿಂದ ಪ್ರತೀ ವರುಶ ರೈಲ್ವೇ ಬಜೆಟ್-ನಲ್ಲಿ ಮೋಸವಾಗುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.
    ಇಂತಹ ವ್ಯವಸ್ಥೆಯಿಂದಾಗಿ, ನಮ್ಮಲ್ಲಿ ಅಭಿವ್ರುದ್ಧಿ ಕುಂಟುತ್ತಾ ಇದೆ.
    ಒಪ್ಪುಕೂಟ (federal) ವ್ಯವಸ್ಥೆ ತಂದರೆ, ಇರುವ ರಾಜ್ಯಗಳಲ್ಲೇ ಹೆಚ್ಚು ಅಭಿವ್ರುದ್ಧಿ ಸಾಧಿಸಬಹುದು.
    ಒಪ್ಪುಕೂಟದಲ್ಲಿ ರಾಜ್ಯಗಳು,
    ೧. ಕಂದಾಯ ಸ್ವೀಕರಿಸುತ್ತವೆ
    ೨. ತಮ್ಮಲ್ಲಿನ ಶಿಕ್ಶಣ ವ್ಯವಸ್ಥೆ ತಾವೇ ನಿರ್ಮಿಸುತ್ತವೆ.
    ೩. ರಸ್ತೆ, ರೈಲು ಇಂತಹ ಸಂಪರ್ಕ ವ್ಯವಸ್ಥೆ ತಾವೇ ಕಟ್ಟುತ್ತವೆ.
    ಕೇಂದ್ರ ಸರ್ಕಾರ external affairs, Defence, ಹೀಗೆ ಮುಖ್ಯ ವಿಷಯಗಳನ್ನು ಮಾತ್ರ ನೋಡಿಕೊಳ್ಳುತ್ತದೆ.
    ನೀವು ಹೇಳಿದಂತೆ ರಾಜ್ಯಗಳನ್ನು ಒಡೆದರೆ, resources ಕಡಿಮೆ ಇರುವ ರಾಜ್ಯಗಳಲ್ಲಿ ತೊಂದರೆ ಉಂಟಾಗಬಹುದು. ಉದಾಹರಣೆಗೆ, ಮಲೆನಾಡು ರಾಜ್ಯದಿಂದ ತುಂಗ ಭದ್ರಾ ನೀರನ್ನು ಬಿಡಿಸಿಕೊಳ್ಳಲು ಉತ್ತರ ಕರ್ನಾಟಕ ಹರ ಸಾಹಸ ಪಡಬೇಕಾಗಬಹುದು.
    ಯೋಚಿಸಿ ನೋಡಿ.

    ReplyDelete
  4. ಮೇಲಿನ ಮಾತುಗಲು ಸರಿ ಅನ್ನಿಸ್ತಿವೆ, ರಾಜ್ಯಗಳನ್ನ ಒಡೆಯೊದು ಸರಿ ಅಲ್ಲ್ ಅನ್ತಾ ನನಗು ಅನಿಸಿದೆ. ನಿಮ್ಮ ಬ್ಲೊಗ್ ಚೆನ್ನಾಗಿದೆ, ಮತ್ತೆ ಇನ್ನು ಹೆಚಾಗಿ ಬರೆಯಿರಿ.

    ReplyDelete
  5. ಕರ್ನಾಟಕವನ್ನು ಒಡೆದು ಮೂರು ಭಾಗ ಮಾಡಿದ್ರೆ ಉದ್ಧಾರ ಆಗ್ತೀವಾ?

    http://vasantabanda.blogspot.com/2009/12/karnatavannu-odedu-3-bhaaga-maadidre.html

    ReplyDelete
  6. ಚಿಕ್ಕ ರಾಜ್ಯ ಚೊಕ್ಕ ರಾಜ್ಯ ಅಗೋದಾಗಿದ್ರೆ ಈಗ ಭಾರತದಲ್ಲಿರುವ ಚಿಕ್ಕ ರಾಜ್ಯಗಳೆಲ್ಲಾ ಹೀಗಿರ್ತಿರಲಿಲ್ಲ !

    ReplyDelete
  7. ಬೇರೆ ಬೇರೆ ರಾಜ್ಯ ಆದರೆ ಗಾಡಿಗಳಿಗೆ ಬೇರೆ ಬೇರೆ ನಂಬರ್ ಪ್ಲೇಟ್ ಕೊಡಬೇಕಾಗುತ್ತೆ . R T O ಬೋಳಿಮಕ್ಕಳಿಗೆ ದುಡ್ದೋ ದುಡ್ಡು !!!!

    ReplyDelete
  8. ಭಾರತದಲ್ಲಿ 50 ರಾಜ್ಯಗಳು ಆದ್ರೆ ಆಗ ಪ್ರಧಾನ ಮಂತ್ರಿಗಳಿಗೆ ೫೦ ಮುಖ್ಯಮಂತ್ರಿಗಳ ಹೆಸರು ನೆನಪಿಡಲು ಕಷ್ಟವಾಗುವುದಿಲ್ಲವೆ?
    ಒಂದು ಐದಾರು ದೇಶ (10-10 ರಾಜ್ಯಗಳ) ಮಾಡಿದರೆ ಹೇಗೆ? ;)

    ReplyDelete