ಬೊಲಿವಿಯಾ ನಿಮಗೆ ಗೊತ್ತಿರಬಹುದು. ದಕ್ಷಿಣ ಅಮೇರಿಕಾದ ಒಂದು ಬಡ ಚಿಕ್ಕ(ಆ ಖಂಡದ ಬೇರೆ ದೇಶಗಳಿಗೆ ಹೋಲಿಸಿದರೆ!!) ದೇಶ. ಸಮುದ್ರ ತೀರವೇ ಇಲ್ಲದ ಈ ದೇಶದ ಜಿಯಾಗ್ರಫಿಯೇ ವಿಚಿತ್ರ. ಪಶ್ಚಿಮ ಭಾಗದಲ್ಲಿ ಗಗನಚುಂಬಿ ಆಂಡಿಸ್ (Andes)ಪರ್ವತ ಶ್ರೇಣಿ. ಪೂರ್ವದಲ್ಲಿ ತಗ್ಗಿನ ಅಮೆಜಾನ್ ಮಳೆಕಾಡು. ಆಲ್ಟಿಪ್ಲೇನೋ ಎಂದು ಕರೆಯಲ್ಪಡುವ ಆಂಡಿಸ್ ಪರ್ವತದ ಅತಿ ಎತ್ತರದ ವಿಶಾಲ ಪ್ರದೇಶದಲ್ಲಿ ಬೊಲಿವಿಯಾದ ರಾಜಧಾನಿ ಲಾ-ಪಾಜ್(La-Paz) ಇದೆ. ಇದು ಪ್ರಪಂಚದ ಅತ್ಯಂತ ಎತ್ತರದ ರಾಜಧಾನಿಗಳಲ್ಲಿ ಒಂದು!! ಸಮುದ್ರ ಮಟ್ಟದಿಂದ 14,000 ಅಡಿಗೂ ಎತ್ತರ. (ನಮ್ಮ ಬೆಂಗಳೂರು 3,000 ಅಡಿ ಹಾಗೂ ನಾನೀಗ ಕೂತು ಬರೆಯುತ್ತಿರುವ ನನ್ನೂರು 2300 ಅಡಿ ಎತ್ತರದಲ್ಲಿದೆ) ರಾಜಧಾನಿ ಲಾ-ಪಾಜನ್ನು ಪಶ್ಚಿಮದ ತಗ್ಗಿನ ಅಮೆಜಾನ್ ಮಳೆಕಾಡಿನ ಪ್ರಾರಂಭದಲ್ಲಿರುವ ಬೊಲಿವಿಯಾದ ಮತ್ತೊಂದು ಪ್ರಮುಖ ನಗರ ಕೊರೈಕೋವನ್ನು ಸೇರಿಸುವ 70 ಕಿ.ಮೀ. ಉದ್ದದ ಹೆದ್ದಾರಿಯೇ ಪ್ರಪಂಚದ ಅತಿ ದುರ್ಗಮ ರಸ್ತೆ-“ಸಾವಿನ ಹೆದ್ದಾರಿ” (Death Road)
ಲಾ-ಪಾಜ್ ದಿಂದ ಹೊರಡುವ ಹೆದ್ದಾರಿ ಮೊದಲ ಕೆಲವು ಕಿಲೋಮೀಟರ್ ಏರು ದಾರಿ ಸಾಗಿ 15,000 ಅಡಿಗೂ ಎತ್ತರ ತಲುಪುತ್ತದೆ. ಅಲ್ಲಿಂದ ಕಿಲೋಮೀಟರ್ಗಟ್ಟಲೆ ಬರೇ ಇಳಿಜಾರು. ರಸ್ತೆ ಮುಗಿಯುವ ಕೊರೈಕೋ ನಗರವಿರುವುದು 3,900 ಅಡಿ ಎತ್ತರದಲ್ಲಿ. ಕೇವಲ 50-60 ಕಿ.ಮೀ. ಗಳಲ್ಲಿ 11,000 ಅಡಿ ಎತ್ತರ ಕಳೆದುಕೊಳ್ಳುತ್ತದೆ ಈ ರಸ್ತೆ. ಹಾವಿನಂತೆ ಆಂಡಿಸ್ ಪರ್ವತಗಳ ಸಂದಿ ಸಂದಿಯಲ್ಲಿ ಸಾಗುವ ಈ ರಸ್ತೆ ಲೆಕ್ಕವಿಲ್ಲದಷ್ಟು ಅಪಾಯಕಾರಿ ತಿರುವುಗಳನ್ನು, ಕಡಿದಾದ ಪ್ರಪಾತಗಳನ್ನು ಹೊಂದಿದ್ದು ಕೆಲವೊಂದುಕಡೆ ಅತಿ ಇಳಿಜಾರಾಗಿದೆ.ಕೆಲವೆಡೆ ಕಡಿದಾದ ಬೆಟ್ಟಗಳನ್ನು ಕೊರೆದು ರಸ್ತೆ ಮಾಡಿದ್ದು ಅಗಲ ತುಂಬಾ ಕಡಿಮೆ. ಪ್ರಪಾತದ ಬದಿಯಲ್ಲಿ ತಡೆ ಗೋಡೆಗಳು ಇಲ್ಲ!! (ನೆಲ ಒದ್ದೆ ಇದ್ದಾಗ ಸ್ವಲ್ಪ ಬದಿಗೆ ವಾಹನ ಹೋದರೆ ಕುಸಿದು ಪ್ರಪಾತಕ್ಕೆ ಸೇರಿದರೂ ಆಶ್ಚರ್ಯವಿಲ್ಲ) ಉರುಳುವ ಜಲ್ಲಿ ಕಲ್ಲುಗಳು ಬೇರೆ. ಇವೆಲ್ಲದಕ್ಕೂ ಜೊತೆಯಾಗಿ ಆಗಾಗ್ಯೆ ಕವಿಯುವ ಮಂಜು ಹಾಗೂ ಮಳೆ!! ದೇಶದ ಎರಡು ಪ್ರಮುಖ ನಗರಗಳನ್ನು ಸೇರಿಸುವ ರಸ್ತೆಯಾದ್ದರಿಂದ ವಾಹನದಟ್ಟಣೆಯನ್ನು ನೀವೇ ಊಹಿಸಿಕೊಳ್ಳಿ-ಲಾರಿಗಳು,ಬಸ್ಸುಗಳು,ಟ್ಯಾಂಕರ್ಗಳು. ವರ್ಷಕ್ಕೆ ಸರಾಸರಿ ನೂರು ಜನ ಸಾಯುತ್ತಿದ್ದರು.
“ನೂರು ಜನ ಸಾಯುತ್ತಿದ್ದರು” – ಎಂದು ಭೂತಕಾಲ ಬಳಸಿದೆ. ಹೌದು. 2006 ರ ಈಚೆಗೆ ಕಾಲ ಬದಲಾಗಿದೆ. ಜನ ಈ ದುರ್ಗಮ ರಸ್ತೆಯಲ್ಲಿ ಓಡಾಡುವ ಅನಿವಾರ್ಯತೆಯಿಲ್ಲ!! ಕಣಿವೆಯ ಮತ್ತೊಂದು ಬದಿಯಲ್ಲಿ ಅಗಲದ ಆದುನಿಕ ರಸ್ತೆ ನಿರ್ಮಾಣವಾಗಿದೆ. ತಡೆಗೋಡೆಗಳೂ ಇವೆ. ಆದರೂ ಪ್ರತಿವರ್ಷ ಸಾವಿರಾರು ಜನ ದುರ್ಗಮ ಆ ಹಳೆ ರಸ್ತೆಯಲ್ಲೇ ಸಂಚರಿಸಲು ಇಷ್ಟಪಡುತ್ತಾರೆ. ಅದೂ ಸೈಕಲ್ಲಲ್ಲಿ!!! ಆಶ್ಚರ್ಯವಾಗಬಹುದು. ಹೌದು ನಿಜ. ರಕ್ತದಲ್ಲಿ ಹೆಚ್ಚು ಅಡ್ರಿನಾಲಿನ್ ಇರುವ ಸಾಹಸಿ ಪ್ರವಾಸಿಗರು. ಅವರಿಗಾಗಿಯೇ ಸೈಕಲ್ ಪ್ರವಾಸ ಆಯೋಜಿಸುವ ಅನೇಕ ಏಜೆಂಟರು ಲಾ-ಪಾಜ್ ನಲ್ಲಿದ್ದಾರೆ. ರಸ್ತೆಯ ಅತಿ ಎತ್ತರದ ಬಾಗಕ್ಕೆ ವಾಹನದಲ್ಲಿ ಸೈಕಲ್ ಮತ್ತು ಸಾಹಸಿಗರನ್ನು ಕೊಂಡೊಯ್ಯಲಾಗುತ್ತದೆ. ಅಲ್ಲಿಂದ ಸೈಕಲ್ ಹತ್ತಿ ಸಾಹಸಿಗರು ಇಳಿಯಲಾರಂಬಿಸುತ್ತಾರೆ. ಬೆಂಗಾವಲಿಗೆ ವಾಹನ ಹಿಂದಿರುತ್ತದೆ. (ಆಗಾಗ್ಯೆ ಟಯರ್-ಬ್ರೇಕ್ ಶೂ ಬದಲಾಯಿಸಲು). ಭೀಕರ ಬಸ್ ಅಪಘಾತದಲ್ಲಿ ತನ್ನ ಕುಟುಂಬದ ಎಲ್ಲಾ ಸದಸ್ಯರನ್ನೂ ಕಳೆದುಕೊಂಡ ವ್ಯಕ್ತಿಯೊಬ್ಬ ಅಪಘಾತ ನಡೆದ ತಿರುವಿನಲ್ಲಿ ವಾಹನಗಳನ್ನು ನಿಯಂತ್ರಿಸಲು ಸದಾ ಇರುತ್ತಾನಂತೆ!!!
ಈ ಪ್ರಪಂಚ ಎಷ್ಟು ವಿಚಿತ್ರ ಅಲ್ವಾ?
ಗ್ರೇಟ್ ಪೋಸ್ಟ್ ಸಾರ್ ...
ReplyDeletenanu North Indiadalli kelavu kade prayanisiddene..eg shimla,uttarakand,J&K adre yella kade ghat sectionannu nodiddene.. nodi tumbha bhaya pattiddene..adre yavaglu charmadi ghat matra yellogidru nenapagutte..! thanku sir great post.
ReplyDeleteಮಾಚಿಕೊಪ್ಪ ಸರ್
ReplyDeleteಇದೊಂದು ನಿಜಕ್ಕೂ ಸಾವಿನ ದವಡೆಗೆ ತಳ್ಳುವ ರಸ್ತೆಯೇ
ನಮ್ಮಲ್ಲಿ ಇರುವ ದೊಡ್ಡ ರಸ್ತೆಯ ಬಗೆಗೆ ನಮಗೆ ನೂರಾರು ತಕರಾರು
ಇನ್ನು ಅಲ್ಲಿಯ ಜನರ ಸ್ಥಿತಿ ಹೇಗಿರಬೇಡ
ನಾವೇ ಸುಖಿಗಳು ಅಲ್ಲವೇ?
ಸಾವಿನ ಹೆದ್ದಾರಿ ಬಗ್ಗೆ ನನಗೆ ಈ ಮೈಲ್ಗಳು ಬಂದಿದ್ದವ್ವು,ತಾವು ಇಲ್ಲಿ ಮಾಹಿತಿ ಕೊಟ್ಟಿದ್ದೀರಾ. ದನ್ಯವಾದಗಳು
ReplyDeleteಹೌದು ಜಗದೀಶ್ ಅವರೆ.
ReplyDeleteಪವರ್ ಪಾಯಿಂಟ್ ಫೈಲ್ ಗಳು ಜಾಲದಲ್ಲಿ ಹರಿದಾಡುತ್ತಿವೆ!!
ಆ ಫೈಲಿನಲ್ಲಿ ಅನೇಕ ಚಿತ್ರಗಳಿವೆ. ಈ ಡೆತ್ ರೋಡ್ನ ಚಿತ್ರಗಳೊಂದಿಗೆ ಚೀನಾದ ಯಾವುದೋ ಒಂದು ಬಂಡೆ ಕೊರೆದು ಮಾಡಿದ ರಸ್ತೆಯ ಒಂದೆರಡು ಚಿತ್ರಗಳೂ ಸೇರಿಕೊಂಡಿವೆ.
ಬಾಲು ಅಣ್ಣ ಈ ರಸ್ತೆಯ ವಿಡಿಯೋ ಹಾಕಿ ಬ್ಲಾಗ್ ಬರಿದಿದ್ದಾರೆ. ನೋಡಿ-
ReplyDeletehttp://nimmolagobba.blogspot.com/2010/04/blog-post_14.html
ನಿಮ್ಮ ಚಿತ್ರ-ಬರಹ ಮಾಹಿತಿಯುಕ್ತ. ಒಮ್ಮೆಗೆ ಚಾರ್ಮಾಡಿ ಘಾಟಿ ರಸ್ತೆ ತಿರುವು ಗಳು, ಕುಸಿದ ಗುಡ್ಡ, ಹೊ೦ಡಗು೦ಡಿ ರಸ್ತೆ ಎಲ್ಲ ನೆನಪಾದುವು. ಚೆನ್ನಾಗಿದೆ.
ReplyDeleteಪೂರ್ಣ ಚಂದ್ರ ತೇಜಸ್ವಿ ಯವರ ಲೇಖನ ಓದಿದ ಅನುಭವವಾಯಿತು.
ReplyDeleteಹೀಗೂ ಉಂಟೇ?
ReplyDeleteThis comment has been removed by the author.
ReplyDeleteಸಹೋದರ ಸುಬ್ರಹ್ಮಣ್ಯ,
ReplyDeleteನಿಮ್ಮ ಲೇಖನಗಳು ಫೂರ್ಣ ಚಂದ್ರ ತೇಜಸ್ವಿಯವರ ಬರಹಗಳನ್ನು ನೆನಪಿಸುತ್ತವೆ. ನಿಮ್ಮ ಲೇಖನಿಯಿಂದ ಈ ಕೈಕಂರ್ಯ ಸತತ ಸಾಗಲಿ ಎಂದು ಹಾರೈಸುವೆ.
very nice info
ReplyDeletemazing info with example
ReplyDelete