Monday, February 15, 2010

Blogger.com ಕ್ಲಿಕ್ಕಿಸದೆ ಹೊಸ ಬ್ಲಾಗ್ ಪ್ರಕಟಿಸುವ ಬಗೆ.


ಈ ವಿಷಯ ನಿಮಗೆ ಗೊತ್ತಿದ್ದರೂ ಗೊತ್ತಿರಬಹುದು. ನಾನು ಇದನ್ನುಆಕಸ್ಮಿಕವಾಗಿ ಕಂಡುಕೊಂಡು ಮೊದಲ ಬಾರಿಗೆ ಪ್ರಯೋಗಿಸುತ್ತಿದ್ದೇನೆ. ಆ ಪ್ರಯೋಗವೇ ಈ ಬರಹ.
ಹೌದು. Internet Explorer ತೆರೆಯದೆ, blogger.com ಎಂದು ಕ್ಲಿಕ್ಕಿಸದೆ ನಾನು ಈ ಹೊಸ ಬ್ಲಾಗ್ ಪ್ರಕಟಿಸುತ್ತಿದ್ದೇನೆ.

 ನಾನು ಮೊದಲ ಬ್ಲಾಗ್ ಪೋಸ್ಟ್ ಬರೆದ ಬಗೆ ಇನ್ನೂ ಜ್ಞಾಪಕದಲ್ಲಿದೆ.(ಇತ್ತೀಚೆಗಷ್ಟೇ ಶುರುಮಾಡಿದ್ದರಿಂದ ಮರೆಯಲು ಹೇಗೆ ಸಾದ್ಯ?) Blogger .com ಹೋಗಿ ಸೈನ್ ಇನ್ ಆಗಿ, ನ್ಯೂ ಪೋಸ್ಟ್ ಮೇಲೆ ಕ್ಲಿಕ್ಕಿಸಿ ಅದರಲ್ಲಿ ಕನ್ನಡವನ್ನು ಆಯ್ಕೆ ಮಾಡಿಕೊಂಡು ಅನಂತರ ಬರೆಯಬೇಕಿತ್ತು. ನಾನಂತೂ ಒಂದು ಲೇಖನವನ್ನು ಒಮ್ಮೆಗೇ ಯಾವತ್ತೂ ಬರೆದವನಲ್ಲ. ಪುರುಸೊತ್ತಾದಾಗೆಲ್ಲ ನಾಲ್ಕೈದು ಸಾಲು ಬರೆದು ಎಂಟತ್ತು ದಿನಕ್ಕೆ ಪೂರೈಸಿ ಇನ್ಯಾವುದೋ ಒಂದು ದಿನ ಪ್ರಕಟಿಸುವವನು. ಪ್ರತೀ ಬಾರಿ ಆನ್ಲೈನ್ನಲ್ಲಿ ಸ್ವಲ್ಪ ಸ್ವಲ್ಪ ಬರೆದು ಸೇವ್ ಮಾಡಿ ಕೊನೆಗೊಮ್ಮೆ ಪ್ರಕಟಿಸುತ್ತಿದ್ದೆ.

 ಈ ಸಮಸ್ಯೆ ಕಡಿಮೆ ಮಾಡಿದ್ದು ಗೂಗಲ್ transliteration.( http://www.google.com/ime/transliteration/) ಅದನ್ನು ನಮ್ಮ ಕಂಪ್ಯೂಟರಿಗೆ ಜಾಲದಿಂದ ಇಳಿಸಿಕೊಂಡು ಆಫ್ ಲೈನಲ್ಲಿ ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ಕನ್ನಡದಲ್ಲಿ ಟೈಪ್ ಮಾಡಬಹುದು.(ಚಾಟ್ ಬಾಕ್ಸ್ ನಲ್ಲೂ ಕನ್ನಡ ಮೂಡಿಸುವುದು ನಮ್ಮ ಕೆಲ ಸ್ನೇಹಿತರಿಗೆ, ನೆಂಟರಿಗೆ ಆಶ್ಚರ್ಯ. ಅದು ಹೇಗೆ-ಎಂದು ಕೇಳುವುದಿದೆ). ಇದನ್ನು ಉಪಯೋಗಿಸಿಕೊಂಡು MS Word ನಲ್ಲಿ ಪುರುಸೊತ್ತಾದಾಗೆಲ್ಲ ಬ್ಲಾಗನ್ನು ಬರೆದು ಮುಗಿದ ಮೇಲೆ ಯಾವತ್ತೋ ಒಂದು ದಿನ ಆನ್ ಲೈನ್ ಇದ್ದಾಗ Blogger.com ಗೆ ಹೋಗಿ ಸೈನ್ ಇನ್ ಮಾಡಿ ನ್ಯೂ ಪೋಸ್ಟ್ ಕ್ಲಿಕ್ ಮಾಡಿ MS Word ಇಂದ ಲೇಖನವನ್ನು ಕಟ್ & ಪೇಸ್ಟ್ ಮಾಡಲಾರಂಭಿಸಿದೆ.

 ಆದರೆ ಈಗ ಆಕಸ್ಮಿಕವಾಗಿ ಬ್ಲಾಗ್ ಪ್ರಕಟಿಸುವ ಹೊಸ ವಿದಾನ ಕಂಡುಕೊಂಡೆ. ಏಮ್.ಎಸ್ ಆಫಿಸ್ ೨೦೦೭ ಇದ್ದವರು ಈ ವಿದಾನ ಬಳಸಬಹುದು. MS Word ತೆರೆದು ನ್ಯೂ ಕ್ಲಿಕ್ ಮಾಡಿ ನ್ಯೂ ಬ್ಲಾಗ್ ಪೋಸ್ಟ್ ಕ್ಲಿಕ್ ಮಾಡಬೇಕು.ಮೊದಲ ಬಾರಿ ಉಪಯೋಗಿಸುವಾಗ ಇಂಟರ್ನೆಟ್ ಆನ್ ಮಾಡಿಕೊಂಡು MS Word ನಲ್ಲಿ ನಮ್ಮ ಬ್ಲಾಗ್ ನೀಡುಗರ ಹೆಸರು, ನಮ್ಮ ಬ್ಲಾಗರ್ ಯುಸರ್ ನೇಮ್, ಪಾಸ್ ವರ್ಡ್, ನೀಡಿ ಒಂದು ಅಕೌಂಟ್ ಕ್ರಿಯೇಟ್ ಮಾಡಬೇಕು. MS Word ಅದನ್ನು ವೇರಿಫೈ ಮಾಡುತ್ತದೆ. ಅನಂತರ ಆಫ್ ಲೈನ್ ಮಾಡಿಕೊಂಡು ಪುರುಸೊತ್ತಾದಾಗೆಲ್ಲ ಬ್ಲಾಗ್ ಲೇಖನ ಬರೆಯುತ್ತಿರಬಹುದು. ಅದು MS Word ನಲ್ಲಿ ಬ್ಲಾಗ್ ಪೋಸ್ಟ್ ಆಗಿ ನಾವು ಕೊಟ್ಟ ಹೆಸರಿನಲ್ಲಿ ಸೇವ್ ಆಗುತ್ತಿರುತ್ತದೆ. ಲೇಖನ ಮುಗಿದಮೇಲೆ ಆನ್ ಲೈನ್ನಲ್ಲಿ ಇದ್ದಾಗ ಪಬ್ಲಿಶ್ ಬಟನ್ ಕ್ಲಿಕ್ ಮಾಡಿದರೆ ಸರಿ. Internet Explorer ತೆರೆಯುವುದೂ ಬೇಡ. ಬ್ಲಾಗರ್ ಕ್ಲಿಕ್ಕಿಸುವುದೂ ಬೇಡ. ಆ ಲೇಖನ ನಮ್ಮ ಬ್ಲಾಗಲ್ಲಿ ಮೂಡಿರುತ್ತದೆ. ಅದಕ್ಕೆ ಈ ಲೇಖನವೇ ಉದಾಹರಣೆ.

ಇದೇ ರೀತಿ Internet Explorer ತೆರೆಯದೆ, google/yahoo ಕ್ಲಿಕ್ ಮಾಡದೆ ನಮ್ಮ ಕಂಪ್ಯೂಟರ್ನಲ್ಲಿ ಇರುವ MS Office Outlook ಉಪಯೋಗಿಸಿ ಇಮೇಲ್ ಕಳಿಸಬಹುದು.(ನಾನು ಮೇಲ್ ಕಳಿಸಲು ಇದೇ ರೀತಿ ಉಪಯೋಗಿಸುವುದು) ಅನೇಕ ಜನ ಹವ್ಯಾಸಿ ಕಂಪ್ಯೂಟರ್ ಬಳಕೆದಾರರು ಈ ವಿಷಯ ತಿಳಿದಿರುವುದಿಲ್ಲ.


ಬ್ಲಾಗನ್ನು ಮೇಲೆ ತಿಳಿಸಿದಂತೆ ಬರೆದು ಪ್ರಕಟಿಸುವ ವಿದಾನ ನಿಮಗೆ ಗೊತ್ತಿತ್ತೆ? ಅಥವಾ ನನಗೆ ಮಾತ್ರ ಇತ್ತೀಚೆಗೆ ಗೊತ್ತಾಗಿದ್ದ?

6 comments:

  1. ಮಾಚಿಕೊಪ್ಪ ಅವರೇ
    ವಿಧಾನ ಚೆನ್ನಾಗಿದೆ
    ನಾನು ಉಪಯೋಗಿಸಿಲ್ಲ
    ಆದರೆ ಇಂದೇ ನೋಡುತ್ತೇನೆ
    ಧನ್ಯವಾದಗಳು ತಿಳಿಸಿದ್ದಕ್ಕೆ

    ReplyDelete
  2. ಉಪಯುಕ್ತ ಮಾಹಿತಿ, ಇ೦ದೇ ಪ್ರಯತ್ನಿಸುವೆ.

    ReplyDelete
  3. ನಂಗೆ ಮೊದಲೇ ಗೊತ್ತಿತ್ತು, ಆದರೆ ಪ್ರಯತ್ನಿಸಿರಲಿಲ್ಲ ಅಷ್ಟೇ. :) ನೀವು ಸುಸೂತ್ರವಾಗಿ ಬಳಸಿದ್ದೀರಿ, ಸೊ ನಾನು ಒಮ್ಮೆ ಪ್ರಯತ್ನ ಮಾಡುವೆ.

    ReplyDelete
  4. 'ಸುಬ್ರಮಣ್ಯ ಮಾಚಿಕೊಪ್ಪ ' ಅವ್ರೆ..,

    ನಮಗೂ ಗೊತ್ತಿರದ ವಿಷಯ.. ಆದರೆ ನನಗೆ ಅಷ್ಟಾಗಿ ಅರ್ಥವಾಗುತ್ತಿಲ್ಲ.. ಪ್ರಯತ್ನಿಸಿ ನೋಡುವೆ..

    Blog is Updated:http://manasinamane.blogspot.com

    ReplyDelete
  5. ಓಹ್ ಹೊಸ ವಿಚಾರವನ್ನು ತಿಳಿಸಿದ್ದೀರಿ, ನನಗೂ ಇದರ ಬಗ್ಗೆ ಗೊತ್ತಿಲ್ಲ, ಪ್ರಯತ್ನಿಸುತ್ತೇನೆ,
    ನಾನು ಬರಹ ಪ್ಯಾಡ್ ಬಳಸಿ ಕನ್ನಡ ಬರೆಯುತ್ತೇನೆ, ಬರಹ ಪ್ಯಾಡ್ ನಲ್ಲಿ ಬರೆದಿಟ್ಟು ಸೇವ್ ಮಾಡುವಾಗ ಯೂನಿಕೋಡ್ ನಲ್ಲಿ ಸೇವ್ ಮಾಡಿಟ್ಟುಕೊಳ್ಳುತ್ತೇನೆ.

    ReplyDelete
  6. ಅಂತೂ ನಾನೂ ಕನ್ನಡ ಬರೆದೆ.

    ReplyDelete